ಜೀವಾತ್ಮಗಳ ವಿಕ್ರಯ

ಜೀವಾತ್ಮಗಳ ವಿಕ್ರಯ ಕಾದಂಬರಿ ನಮ್ಮ ದೇಶದ ಭೂಸ್ವಾಧೀನ ಮಾಡುವ ವ್ಯವಸ್ಥೆಯ ಹಿನ್ನೆಲೆಯಲ್ಲಿ ಹಳ್ಳಿಯ ಯುವಕರ ಅಪೂರ್ವ ಮುಗ್ಧ ಪ್ರೇಮ ಪರ್ವ. ತಮ್ಮ ಪೂರ್ವಜರ ಮನೆ ಮಠ ಮತ್ತು ಪರಂಪರೆಯ ಆಸ್ಥಿಯ ಹಳ್ಳಿಗಳನ್ನು ಉಳಿಸಿಕೊಳ್ಳಲು ಇಂದಿಗೂ ನಡೆದಿರುವ ಹೋರಾಟದ ಕತೆ ಇದು. ರೋಶನಿ ಎಂಬ ಹಳ್ಳಿಯ ತರುಣಿ ವಕೀಲೆ ಮುಗ್ಧ ಹಳ್ಳಿಗರೊಂದಿಗೆ ಕೈಜೋಡಿಸಿ ಅವರ ಪೂರ್ವಜರ ಹಳ್ಳಿಗಳನ್ನು ಉಳಿಸಿಕೊಳ್ಳಲು ಶಕ್ತಿಶಾಲಿ ಪ್ರಭಾವಿ ಶ್ರೀಮಂತ ಉಧ್ಯಮಿ ಮತ್ತು ರಾಜಕಾರ್ಣಿಗಳೊಡನೆ ಸಮರ ಸಾರುತ್ತ ಸಮರನ ಪ್ರೇಮದಲ್ಲಿ ಸೆರೆಯಾಗುತ್ತಾಳೆ. ಸಮರ ಅದೆ ಊರಿನ ವಿದ್ಯಾವಂತ ಯುವಕ ಪ್ರಾದ್ಯಾಪಕ ಶಾಂತಿಯುತವಾಗಿ, ಈ ಸಮಸ್ಯೆಗೆ ಪರಿಹಾರ ಕಾಣಲು ರೋಶನಿಯೊಂದಿಗೆ ನಿಂತು ಹೋರಾಟದ ಸನ್ನಿವೇಶದಲ್ಲಿ ಪಾಲುದಾರನಾಗಿ ಅವಳ ಸ್ನೇಹ ಪ್ರೇಮವಾಗಿ ಚಿಗುರೊಡೆಯುತ್ತದೆ. ಭಾರತ ದೇಶದ ಅಭಿವದ್ಧಿಗಾಗಿ ಮಾಡಿದ ಭೂಸ್ವಾಧೀನದ ಸಮಸ್ಯೆಗಳನ್ನು ಪರಿಗಣಿಸಿ, ಈ ಕಾದಂಬರಿಯನ್ನು ಉತ್ತರ ಕನ್ನಡ ಜಿಲ್ಲೆಯ ಸೃಷ್ಠಿ ಸೌಂದರ್ಯದ ತಾಣವಾದ ಕಾರವಾರದ ಮೂರು ಹಳ್ಳಿಯ ಸನ್ನಿವೇಷದಲ್ಲಿ ಬರೆಯಲಾಗಿದೆ. ದೂರದ ಕೊಂಪೆಯೊಂದರಲ್ಲಿ ಈ ವೈವಿಧ್ಯಮಯವಾದ ಸುಂದರ ಪರಿಸರದ ಊರು ಭೂಸ್ವಾಧೀನಕ್ಕೆ ಒಳಪಟ್ಟು ಹೋರಾಟದ ಕಥಾವಸ್ತುವಾಗಿ ಈ ಕಾದಂಬರಿಯನ್ನು ಮೆರಗುಗೊಳಿಸುತ್ತದೆ. ಇದೊಂದು ಅತಿ ಸೂಕ್ಷ್ಮ ವಿಷಯದ ಪ್ರಾರ್ಥನೆಯಾಗಿದ್ದು ಬಡತನದ ವಿರುದ್ಧ ಅಭಿವದ್ಧಿ ಮತ್ತು ಪರಿಸರದ ದ್ವಂದ್ವದ ಸುತ್ತ ನಡೆದಿರುವ ಸ್ವಾರಸ್ಯಕರ ಸಂಘರ್ಷದ ಸನ್ನಿವೇಷದ ಕಾದಂಬರಿ. ನಮ್ಮ ದೇಶದ ಬಡತನವನ್ನು ನಿವಾರಿಸಲು ಅಭಿವದ್ಧಿ ಮಾಡಿ ಪರಿಸರಕ್ಕೆ ಹಾನಿ ಮಾಡುವುದು ಸೂಕ್ತವೊ? ಅಥವಾ ಅಭಿವದ್ಧಿ ಬೇಡವೊ? ಇದು ಓದುಗರ ವಿವೇಕದ ಚಿಂತನೆಗೆ ಸಮರ್ಪಿತ.

Buy online

Pay through following apps for purchase on the mobile phone number.
Phone No: +919632715093.

Postage free for India only. Outside India add additional/check & include postage before transfer.

Jeevatmagala Vikraya(Kannada Novel)- Rs 150.00

ದಯವಿಟ್ಟು ಪುಸ್ತಕವನ್ನು ಸುಲಭವಾಗಿ ಈ ಮೋಬ್ಯಲ ಸಂಖ್ಯೆಯ ಮೂಲಕ +919632715093 ಹಣವನ್ನು ರವಾನಿಸಿ ಖರೀದಿಸಿರಿ.

(ಪೋಸ್ಟೇಜ ಸೇರಿಸಿ ಭಾರತ ದೇಶಕ್ಕೆ ಮಾತ್ರ.)

ಜೀವಾತ್ಮಗಳ ವಿಕ್ರಯ(ಕನ್ನಡ ಕಾದಂಬರಿ)-₹ ೧೫೦.೦೦

Review & Rate

ಪರೇಶ
Rate: 4.5/5
ಬಡತನದ ಉತ್ತಮ ಚಿತ್ರಣ.
Posted on:2019-09-04
MAHESH
Rate: 4.5/5
ತುಂಬಾ ವಿಭಿನ್ನವಾಗಿ ಇರುವ ಕಾದಂಬರಿ ಮತ್ತು ತುಂಬಾ ಅದ್ಭುತವಾಗಿ ಮೂಡಿಬಂಧಿದೆ. ಧನ್ಯವಾಧಗಳು
Posted on:2019-06-19
Chandrakant
Rate: 4/5
ಎಲ್ಲರೂ ಓದಬೇಕಾದ ಒಂದು ಉತ್ತಮ ಕಾದಂಬರಿ. ಕನ್ನಡ ಸಾಹಿತ್ಯ ಲೋಕದಲ್ಲಿ ವಿಭಿನ್ನ ಪ್ರಯೋಗ.ನನ್ನನ್ನು ಓದಿಸಿಕೊಡು ಹೋಯಿತು.ಕೊನೆಗೆ ಸ್ವಲ್ಪ ಬೇಸರವೂ ಆಯಿತು.
Posted on:2019-02-13
Madhukar
Rate: 4.5/5
ತುಂಬಾ ಸ್ವಾರಸ್ಯಕರ ವಿಭಿನ್ನ ಸಾಹಿತ್ಯದ ಕಾದಂಬರಿ.
Posted on:2019-02-10
Madhukar
Rate: 4.5/5
ತುಂಬಾ ಸ್ವಾರಸ್ಯಕರ ವಿಭಿನ್ನ ಸಾಹಿತ್ಯದ ಕಾದಂಬರಿ.
Posted on:2019-02-10
ರಾಜೀವ ರಾಣೆ
Rate: 4/5
ಉತ್ತಮ ಕಥಾವಸ್ತು. ಓದಿಸಿಕೊಂಡು ಹೋಗುತ್ತದೆ
Posted on:2019-02-04
Shanti
Rate: 4.5/5
ತುಂಬಾ ಇಷ್ಟವಾಯಿತು ಕಾದಂಬರಿ.
Posted on:2019-02-04

Books

  ಜೀವಾತ್ಮಗಳ ವಿಕ್ರಯ

  ಕನ್ನಡ ನುಡಿಸಿರಿ

  I ALSO WANT TO FALL IN   LOVE

  BEYOND WILD  BLUE   YONDER

  CRICKET IS MY RELIGION         & SACHIN IS OUR GOD

  SALE OF SOULS